ಮಾರುಕಟ್ಟೆಯೇ ತಿರುಗಿ ನೋಡುವ ಆಫರ್ ಕೊಟ್ಟ ಏರ್‌ಟೆಲ್‌: ಜಿಯೋದಿಂದ ಸಾಧ್ಯವೇ..?

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸದ್ಯದ ನಂಬರ್ ಒನ್ ಕಂಪನಿ ಎಂದು ಗುರುತಿಸಿಕೊಂಡಿರುವ ಏರ್‌ಟೆಲ್ ತನ್ನ ಬಳಕೆದಾರರಿಗೆ ಹೊಸ ಮಾದರಿಯ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಈ ಬಾರಿ ಬಳಕೆದಾರರಿಗೆ ಹೆಚ್ಚು ವ್ಯಾಲಿಡಿಟಿಯನ್ನು ಹೊಂದಿರುವ ಆಫರ್ ಅನ್ನು ಲಾಂಚ್ ಮಾಡಿದ್ದು, ವಾಯ್ಸ್-ಡೇಟಾ ಕಾಂಬೋ ಸೇವೆಯನ್ನು ಹೊಂದಿರುವ ಈ ಆಫರ್ ನಲ್ಲಿ ಬಳಕೆದಾರರು ಹೆಚ್ಚಿನ ಲಾಭವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಪ್ರಮಾಣದ ಡೇಟಾವನ್ನು ಹಾಗೂ ಕರೆ ಮಾಡುವ ಅವಕಾಶ ಸೇರಿದಂತೆ SMS ಮಾಡುವ ಆಯ್ಕೆಯನ್ನು ಏರ್‌ಟೆಲ್ ಹೊಸದಾಗಿ ನೀಡಿರುವ ರೂ.289 ಪ್ಲಾನ್‌ನಲ್ಲಿ ಕಾಣಬಹುದಾಗಿದೆ. ಈ ಆಫರ್ ಐಡಿಯಾ ಲಾಂಚ್ ಮಾಡಿರುವ ರೂ.295 ಪ್ಲಾನ್‌ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಲಾಂಚ್ ಆಗಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಈ ಪ್ಲಾನ್ ಹೆಚ್ಚಿನ ಮಂದಿಯನ್ನು ಸೆಳೆಯಲಿದೆ.
48 ದಿನಗಳ ವ್ಯಾಲಿಡಿಟಿ:
ಇಷ್ಟು ದಿನ ಮಾರುಕಟ್ಟೆಯಲ್ಲಿ ಕೇವಲ ಕಡಿಮೆ ವ್ಯಾಲಿಟಿಡಿಯ ಪ್ಲಾನ್‌ಗಳು ಮಾತ್ರವೇ ಕಾಣಿಸಿಕೊಳ್ಳುತ್ತಿತು. ಆದರೆ ಈ ಬಾರಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಸಾಕಷ್ಟು ಹೆಚ್ಚಿನ ವ್ಯಾಲಿಡಿಟಿಯನ್ನು ಈ ಆಫರ್ ನಲ್ಲಿ ನೀಡಲು ಮುಂದಾಗಿದೆ. ಒಟ್ಟು 48 ದಿನಗಳ ವ್ಯಾಲಿಡಿಟಿಯನ್ನು ರೂ.289 ಪ್ಲಾನ್ ಪಡೆದುಕೊಂಡಿದೆ. ಇದರಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

ನಿತ್ಯ 1 GB ಡೇಟಾ:

ರೂ.289ಕ್ಕೆ ದೊರೆಯುತ್ತಿರುವ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಏರ್‌ಟೆಲ್, ನಿತ್ಯ 1 GB ಡೇಟಾವನ್ನು ನೀಡುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟು 48 GB ಡೇಟಾ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಬಹುದು.

ಅನ್‌ಲಿಮಿಟೆಡ್ ಕರೆಗಳು:

ಏರ್‌ಟೆಲ್ ನೀಡುತ್ತಿರುವ ರೂ.289 ಪ್ಲಾನ್‌ನಲ್ಲಿ ಬಳಕೆದಾರರಿಗೆ ಸಾಕಷ್ಟು ದೊಡ್ಡ ಮಾದರಿಯಲ್ಲಿ ಲಾಭವನ್ನು ಮಾಡಿಕೊಳ್ಳುತ್ತಿದೆ. ಅನ್‌ಲಿಮಿಟೆಡ್ ಕರೆಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಆಫರ್‌ಗಳು ಇದರಲ್ಲಿ ಲಭ್ಯವಾಗುತ್ತಿದೆ. ಅಲ್ಲದೇ ನಿತ್ಯ 100 SMS ಕಳುಹಿಸುವ ಅವಕಾಶವು ದೊರೆಯಲಿದೆ ಎನ್ನಲಾಗಿದೆ.

ಜಿಯೋಗೆ ಸೆಡ್ಡು:

ಏರ್‌ಟೆಲ್ ಲಾಂಚ್ ಮಾಡಿರುವ ಹೊಸ ಪ್ಲಾನ್ ನೇರವಾಗಿ ಜಿಯೋಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಸ್ಪರ್ಧೆಯ ಇಂದು ಭಾಗವಾಗಿ ಈ ಪ್ಲಾನ್ ಲಾಂಚ್ ಆಗಿದೆ ಎನ್ನಲಾಗಿದೆ.

ಐಡಿಯಾ ಪ್ಲಾನ್:
ಇದಲ್ಲದೆ ಐಡಿಯಾ ತನ್ನ ಬಳಕೆದಾರರಿಗೆ ಒಟ್ಟು 42 ದಿನಗಳ ವ್ಯಾಲಿಡಿಟಿಯನ್ನು ನೀಡಲು ಮುಂದಾಗಿದೆ. ಇದು ರೂ.295ಕ್ಕೆ ದೊರೆಯುತ್ತಿದ್ದು, ಇದರಲ್ಲಿ 1000 ನಿಮಿಷಗಳ ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೇ 5GB ಡೇಟಾವನ್ನು ಮಾತ್ರವೇ ಬಳಕೆಗೆ ನೀಡಲಿದೆ ಎನ್ನಲಾಗಿದೆ.

Comments