ಬಿಗ್ ಬ್ರೇಕಿಂಗ್ ನ್ಯೂಸ್: ಡಿಕೆಶಿ ಬಂಧನದ ಸುಳಿವು ನೀಡಿದ ವಿಪಕ್ಷ ನಾಯಕ..! ಡಿಕೆಶಿ ಆಟ ಹೆಚ್ಚು ದಿನ ನಡೆಯಲ್ಲವೆಂದ ಕೋಟ!!!
ಒಂದು ವರ್ಷದಿಂದ ಐಟಿ ಹಾಗೂ ಇಡಿ ಇಲಾಖೆಗಳ ಭಯದ ನೆರಳಿನಲ್ಲೇ ಜೀವನ ನಡೆಸುತ್ತಿರುವ ಕರ್ನಾಟಕ ರಾಜ್ಯ ಜಲ ಸಂಪನ್ಮೂಲ ಹಾಗೂ ವೈಧ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್‍ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಕಳೆದ ಕೆಲ ದಿನಗಳಿಂದ ಮತ್ತೆ ಡಿಕೆಶಿ ಮೇಲೆ ಇಡಿ ಏಟು ಬಿದ್ದಿದೆ. ಈ ಮಧ್ಯೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಡಿಕೆಶಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ “ಡಿಕೆಶಿ ಆಟ ಹೆಚ್ಚು ದಿನ ನಡೆಯೋದಿಲ್ಲ. ಇಡಿ ನೋಟೀಸ್ ಬರುತ್ತೆ ಎಂಬ ಆತಂಕ ಡಿಕೆ ಶಿವಕುಮಾರ್ ಅವರಿಗಿದೆ. ಅಪಾರ ಅಕ್ರಮ ಸಂಪತ್ತು ಹೊಂದಿರುವ ಕಾರಣ ಅವರ ಮೇಲೆ ಕಾನೂನು ಕ್ರಮ ಜಾರಿಯಾಗಿದೆ. ಆದರೆ ಡಿಕೆ ಬ್ರದರ್ಸ್ ಇನ್ನೂ ಅಧಿಕಾರದ ಭ್ರಮೆಯಲ್ಲಿದ್ದಾರೆ. ತಮ್ಮ ಬಳಿ ಯಾವುದೇ ಅಕ್ರಮ ಸಂಪತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ಹೌದೆನ್ನುವುದಾದರೆ ಐಟಿ ಹಾಗೂ ಇಡಿ ಗೆ ಅವರು ಹೆದರೋದ್ಯಾಕೆ” ಎಂದು ಪ್ರಶ್ನಿಸಿದ್ದಾರೆ.
ಒಟ್ಟಾರೆ ಇದೀಗ ಐಟಿ ಹಾಗೂ ಇಡಿ ಮೇಲಿನ ತಲೆ ನೋವು ಡಿಕೆ ಶಿವಕುಮಾರ್‍ಗೆ ಹೆಚ್ಚಾಗಿದ್ದು ಯಾವ ಕ್ಷಣದಲ್ಲೂ ಬಂಧನವಾಗುವ ಸಾಧ್ಯತೆ ಹೆಚ್ಚಾಗಿದೆ. ಮಾತ್ರವಲ್ಲದೆ ತಾನು ಗಳಿಸಿಟ್ಟ ಅಕ್ರಮ ಸಂಪತ್ತನ್ನು ಮುಚ್ಚಿಡಲು ಪ್ರಯತಿಸುತ್ತಿರುವ ಡಿಕೆ ಶಿವಕುಮಾರ್ ಹಾಗೂ ಅವರ ಸಹೋದರ ಡಿಕೆ ಸುರೇಶ್‍ಗೂ ಕಂಟಕ ಎದುರಾಗಲಿದೆ.



Comments
Post a Comment