ಬಿಗ್ ಬ್ರೇಕಿಂಗ್: ರಾಜ್ಯದ ರೈತರಿಗೆ ಬಿಗ್ ಶಾಕ್ ನೀಡಿದ ಕುಮಾರಸ್ವಾಮಿ ಸರ್ಕಾರ!!!!!

ರಾಜ್ಯ ಸರ್ಕಾರ ಇದೀಗ ರೈತರಿಗೆ ಬಿಗ್ ಶಾಕ್ ನೀಡಿದ್ದು, ರೈತರ 1 ಲಕ್ಷದವರೆಗಿನ ಮೊತ್ತದ ಬೆಳೆ ಸಾಲ ಮನ್ನಾ ಮಾಡಲು ಕಠಿಣ ಷರತ್ತುಗಳನ್ನು ವಿಧಿಸಿದೆ.
ಬೆಳೆ ಸಾಲ ಮನ್ನಾ ಯೋಜನೆಯ ಆದೇಶದಲ್ಲಿ ಒಟ್ಟು 11 ಷರತ್ತುಗಳನ್ನು ಉಲ್ಲೇಖಿಸಲಾಗಿದ್ದು, ಈ ಷರುತ್ತುಗಳನ್ನು ಪಾಲಿಸದಿದ್ದರೆ ಸಾಲಮನ್ನಾ ಅಸಾಧ್ಯ. ಪಾಲಿಸಿದರೂ ಸಾಲ ಮನ್ನಾ ಸೌಲಭ್ಯ ಪಡೆಯಲು ಸಾಧ್ಯವೇ ಎಂಬಂತಾಗಿದೆ ರೈತರ ಪರಿಸ್ಥಿತಿ.


10-07-2018 ಕ್ಕೆ ಹೊರಬಾಕಿ ಇರುವಲ್ಲಿ 1 ಲಕ್ಷ ಮೊತ್ತದವರೆಗೆ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಆದರೆ ಸುಸ್ತಿದಾರ ರೈತನ ಸಹಕಾರಿ ಸಂಘದ ಉಳಿದ ಖಾತೆಯೂ ಖಾಲಿ ಇರಬೇಕು. ಒಂದು ವೇಳೆ ಖಾತೆಯಲ್ಲಿ ಸ್ವಲ್ಪ ಠೇವಣಿ ಇದ್ದರೂ ಮನ್ನಾ ಮೊತ್ತ ಪೂರ್ತಿ ಸಿಗದು, ರೈತನ ಖಾತೆಯಲ್ಲಿರುವ ಠೇವಣಿ ಮೊತ್ತವನ್ನು ಸಾಲ ಮನ್ನಾ ಮೊತ್ತದಿಂದ ಕಡಿತಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸಾಲಮನ್ನಾದಿಂದ ಸ್ವಲ್ಪ ಮಟ್ಟಿಗೆ ಸಂತೃಪ್ತಿಯಾಗಿದ್ದ ರೈತರಿಗೆ ಈ ಸುದ್ದಿ ಕೇಳಿ ನಿಜಕ್ಕೂ ಅಘಾತವಾಗಿದೆ

Comments