ಬ್ರೇಕಿಂಗ್ ನ್ಯೂಸ್: ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಹೆಚ್.ಡಿ.ದೇವೆಗೌಡರ ಕಾಲೆಳೆದ ಪ್ರಧಾನಿ ಮೋದಿ!


ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮಿಯತೆ ಮುಂದುವರೆದಿದೆ. ವಿಕೋಪ ಪರಿಹಾರಕ್ಕೆ ನೆರವು ಕೋರಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ನಿಯೋಗ ತಮ್ಮ ಭೇಟಿ ಮಾಡಿದಾಗ ಜೊತೆಗಿದ್ದ ದೇವೇಗೌಡರನ್ನು ಪ್ರಧಾನಿ ಮೋದಿ ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡಿದ್ದರು.

ಈ ವೇಳೆ ಪ್ರಧಾನಿ ಮೋದಿ, ನಿಯೋಗದಲ್ಲಿ ನಿಮ್ಮ ಕುಟುಂಬದವರೇ ಅರ್ಧದಷ್ಟಿದ್ದಾರಲ್ಲಾ ಎಂದು ಕಾಲೆಳೆದರು. ರಾಜ್ಯಕ್ಕೆ ಸಂಬಂಧಿಸಿದ ವಿಷಯವಲ್ಲವೇ ಎಂದು ಹೇಳಿ ದೇವೇಗೌಡರು ನಕ್ಕರು. ನೀರಾವರಿ ಸೇರಿದಂತೆ ರಾಜ್ಯದ ವಿಚಾರ ಪ್ರಸ್ತಾಪವಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್.ಡಿ.ದೇವೇಗೌಡರನ್ನು ಸ್ಮರಿಸಿಕೊಂಡರು.

ಅವರ ಹಿರಿತನ, ಅನುಭವಗಳನ್ನು ಹೊಗಳುವುದು ಸಾಮಾನ್ಯ. ಅದೇ ರೀತಿಯಲ್ಲಿ ನಿಯೋಗದಲ್ಲಿ ತಮ್ಮನ್ನು ಭೇಟಿಯಾದ ದೇವೇಗೌಡರನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾಜಿ ಪ್ರಧಾನಿಗೆ ಗೌರವವನ್ನು ತೋರಿದರು ಮತ್ತು ರಾಜ್ಯದ ಸ್ಥಿತಿಗತಿ ಕುರಿತಂತೆ ಮಾತನಾಡಿದರು.

Comments