ಬಿಗ್ ಬ್ರೇಕಿಂಗ್ ನ್ಯೂಸ್: ಮಾಂಸ ತಿಂದು ರಾಹುಲ್ ಗಾಂಧಿ ಮಾನಸ ಸರೋವರ ಯಾತ್ರೆ ಮಾಡಿದ್ದಾರೆ! ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದವರು ಯಾರು ಗೊತ್ತಾ???
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಂಸ ತಿಂದು ಮಾನಸ ಸರೋವರ ಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಹೇಳಿಕೆ ನೀಡಿರುವ ಯತ್ನಾಳ್ , ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ಮಾನಸ ಸರೋವರಕ್ಕೆ ತೆರಳಿದ್ದು, ಮಾಂಸ ತಿಂದು ಯಾತ್ರೆ ನಡೆಸಿದ್ದಾರೆ. ಇದೇ ರೀತಿ ಮಾಡಿ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡರು. ರಾಹುಲ್ ಗಾಂಧಿಗೆ ಶ್ರದ್ಧಾಕೇಂದ್ರಗಳ ಪಾವಿತ್ರ್ಯತೆ ಗೊತ್ತಿಲ್ಲ. ಪವಿತ್ರ ಸ್ಥಾನಗಳಿಗೆ ಭೇಟಿ ನೀಡಿ ಚಿಕನ್ ಸೂಪ್ ಕುಡಿದರೆ ಹೇಗೆ? ಎಂದು ಹೇಳಿದ್ದರೆ.
ಇನ್ನು ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್ ಹಾಕಿದವರನ್ನು ಚಿಂತಕರು ಎನ್ನುತ್ತಾರೆ. ಅದೇ ರಾಜೀವ್ ಗಾಂಧಿಯನ್ನು ಕೊಂದವರನ್ನು ಭಯೋತ್ಪಾದಕರು ಎನ್ನುತ್ತಾರೆ. ಪ್ರಧಾನಿಗಳಲ್ಲಿ ವ್ಯತ್ಯಾಸವಿದೆಯಾ ಎಂದು ಕಿಡಿಕಾರಿದರು.


Comments
Post a Comment