ಶಾಕಿಂಗ್ ನ್ಯೂಸ್: ಕೊನೆಗೂ ಕಾಂಗ್ರೆಸ್ ತಪ್ಪು ಬಿಚ್ಚಿಟ್ಟ ಮಾಜಿ ಆರ್ ಬಿ ಐ ಗವರ್ನರ್!! ಅತಿಯಾದ ಸಾಲಗಳಿಗೆ ಹಿಂದಿನ ಸರಕಾರದ ನಿರ್ಲಕ್ಷ್ಯವೇ ಕಾರಣವಂತೆ...!!!!
ಸುಮಾರು 60 ವರ್ಷಗಳ ಕಾಲ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ದೇಶ ಅಭಿವೃದ್ಧಿ ಮಾಡುವ ಬದಲು ಇದ್ದ ಬದ್ದ ಹಗರಣಗಳನ್ನೇ ಮಾಡಿದ್ದು ಜಾಸ್ತಿ!! ಜನರು ಮತ ಹಾಕಿ ಯುಪಿಎ ಸರಕಾರವನ್ನು ಅಧಿಕಾರಕ್ಕೇರಿಸಿದರೂ ಜನರಿಗೆ ಚಳ್ಳೆ ಹಣ್ಣು ತಿನ್ನಿಸುವ ಮೂಲಕ ಒಂದೊಂದೇ ಹಗರಣವನ್ನು ಮಾಡಿ ಇಡೀ ದೇಶವನ್ನೇ ಲೂಟಿ ಮಾಡಿಬಿಟ್ಟರು!! ಯುಪಿಎ ಸರಕಾರದ ಅವಧಿಯಲ್ಲಿ ನೇಮಿಸಿದ್ದ ಆರ್‍ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಮೊದಲು ಕಾಂಗ್ರೆಸ್‍ನ್ನೇ ಬೆಂಬಲಿಸುವ ಮೂಲಕ ಅವರು ಯಾವ ರೀತಿ ಹಗರಣವನ್ನು ಮಾಡಿದರೂ ಯುಪಿಎ ಸರಕಾರಕ್ಕೇ ಬೆಂಬಲಿಸುತ್ತಿದ್ದರು!!
ಆದರೆ ಇತ್ತೀಚೆಗೆ ಮಾಜಿ ಗವರ್ನರ್ ಕಾಂಗ್ರೆಸ್ ಸರಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ!! ಯುಪಿಎ ಸರಕಾರ ದುರಾಡಳಿತದ ಬಗ್ಗೆ ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ರಘುರಾಮ್ ರಾಜನ್ ಟೀಕಿಸಿದ್ದಾರೆ. ಇದೀಗ 2006 ರಿಂದ 2008ರವರೆಗೆ ಯುಪಿಎ ಸರಕಾರದ ನಿರ್ಲಕ್ಷ್ಯದಿಂದಾಗಿ ಬ್ಯಾಂಕ್‍ನಲ್ಲಿ ಮರುಪಾವತಿಯಾಗದ ಸಾಲಗಳಿವೆ ಎಂದು ಟೀಕಿಸಿದ್ದಾರೆ!!
ಮುರಳಿ ಮನೋಹರ್ ಜೋಷಿ ನೇತೃತ್ವದ ಅಂದಾಜುಗಳ ಕುರಿತ ಸಂಸದೀಯ ಸಮಿತಿಗೆ ನೀಡಿರುವ ಉತ್ತರದಲ್ಲಿ ರಘುರಾಮ್ ರಾಜನ್, ಸರ್ಕಾರದ ಆಡಳಿತದಲ್ಲಿ ಹಲವು ರೀತಿಯ ಸಮಸ್ಯೆಗಳಿವೆ. ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ಸಂಶಯ ಉಂಟಾಗುತ್ತಿದೆ ಮತ್ತು ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದರಲ್ಲಿನ ನಿಧಾನಗತಿ ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ, ಅದು ಹಿಂದಿನ ಯುಪಿಎ ಸರ್ಕಾರ ಅವಧಿಯಲ್ಲಿ ನಡೆದಿದ್ದು ಇದೀಗ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ. ಇಂತಹ ಸ್ಥಿತಿ ನಿರ್ಮಾಣವಾಗಿರುವುದು ಯುಪಿಎ ಸರಕಾರದಿಂದ ಎಂಬುವುದನ್ನು ಹೇಳಿದ್ದಾರೆ!! ಅದಲ್ಲದೆ ಮರುಪಾವತಿಯಾಗದ ಸಾಲಗಳು ಹೆಚ್ಚಾಗಿರುವುದಕ್ಕೆ ಕಾರಣ ಬ್ಯಾಂಕುಗಳ ಅತಿಯಾದ ಆಶಾವಾದ, ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಆರ್ಥಿಕ ಬೆಳವಣಿಗೆಯಲ್ಲಿನ ಕುಂಠಿತತೆಗೆ ಮುಖ್ಯ ಕಾರಣ ಯುಪಿಎ ಸರಕಾರ ಎಂದು ರಘುರಾಮ್ ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಪಿಎ ಸರಕಾರದ ಅವಧಿಯಲ್ಲಿ ಬ್ಯಾಂಕುಗಳು ದೊಡ್ಡ ಸಾಲಗಳ ಮರುಪಾವತಿ ಬಗ್ಗೆ ಅಗತ್ಯ ಗಮನ ವಹಿಸಿಲ್ಲ. 2008ರ ಆರ್ಥಿಕ ಹಿಂಜರಿತ ಬಳಿಕ ತಮ್ಮ ಬೆಳವಣಿಗೆ ಬಗ್ಗೆ ಬ್ಯಾಂಕುಗಳ ಅಂದಾಜುಗಳು ಅವಾಸ್ತವಿಕವಾಗಿದ್ದವು ಎಂದು ರಘುರಾಮ್ ರಾಜನ್ ಹೇಳಿದ್ದಾರೆ. ಸಮರ್ಪಕವಾಗಿ ಮರುಪಾವತಿಯಾಗದ ಸಾಲಗಳು ಅನುತ್ಪಾದಕ ಆಸ್ತಿಗಳಾಗುವುದನ್ನು ತಡೆಯಲು ಬ್ಯಾಂಕುಗಳು ಇನ್ನಷ್ಟು ಸಾಲಗಳನ್ನು ನೀಡಿದ್ದವು ಎಂದು ರಾಜನ್ ಸಮಿತಿಗೆ ತಿಳಿಸಿದ್ದರು ಎನ್ನಲಾಗಿದೆ.
ಆರ್ಥಿಕ ಬೆಳವಣಿಗೆ ಬಲಿಷ್ಟವಾಗಿದ್ದ 2006ರಿಂದ 2008ರವರೆಗೆ ಅತಿ ಹೆಚ್ಚಿನ ಪ್ರಮಾಣದ ಅನುತ್ಪಾದಕ ಮತ್ತು ಮರು ಪಾವತಿಯಾಗದ ಸಾಲಗಳು ಸೃಷ್ಟಿಯಾದವು. ಇಂತಹ ಸಮಯದಲ್ಲಿ ಬ್ಯಾಂಕುಗಳು ತಪ್ಪುಗಳನ್ನು ಮಾಡುತ್ತವೆ. ಆ ಸಮಯದಲ್ಲಿ ಭವಿಷ್ಯದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯನ್ನು ಬ್ಯಾಂಕುಗಳು ಕಡೆಗಣಿಸುತ್ತವೆ ಎಂದು ಪ್ರಸ್ತುತ ಅಮೆರಿಕಾದ ಚಿಕಾಗೊ ಬೂತ್ ಸ್ಕೂಲ್ ಆಫ್ ಬಿಸಿನೆಸ್ ನಲ್ಲಿ ಪ್ರೋಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ರಘುರಾಮ್ ರಾಜನ್ ಹೇಳಿದ್ದಾರೆ.
ಅರ್ಥಶಾಸ್ತ್ರಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ಎಲ್ಲಾ ವಿಭಾಗಗಳ ಮೇಲೆ ಕೇಂದ್ರ ಸರಕಾರ ತೀವ್ರವಾದ ಹಸ್ತಕ್ಷೇಪ ನಡೆಸಿತ್ತು. ಇದರಿಂದಾಗಿ ಇಂದು ಬ್ಯಾಂಕಿಂಗ್ ಕ್ಷೇತ್ರ ಸಮಸ್ಯೆಯ ಸುಳಿಯಲ್ಲಿ ಸಿಲುಕುವಂತಾಗಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಕೂಡಾ ಹೇಳಿದ್ದರು!! ಇದರಂತೆ ತಂತ್ರಜ್ಞಾನವು ಪಾರದರ್ಶಕತೆಯನ್ನು ಹೊಂದಿದ ಸಮಯದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಅದೊಂದು ಸಮಸ್ಯೆಯಾಗಿದೆ ಎಂದು ಅವರು ಹೇಳಿದ್ದರು!!
ಅರುವತ್ತು ವರ್ಷಗಳಲ್ಲಿ ಯುಪಿಎ ಸರಕಾರ ಎನ್‍ಡಿಎ ಸರಕಾರದ ರೀತಿಯಲ್ಲಿ ಸರಿಯಾಗಿ ಅಧಿಕಾರ ನಡೆಸಿದ್ದರೆ ಭಾರತ ಪ್ರತೀಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿಯನ್ನು ಹೊಂದಿದ ರಾಷ್ಟ್ರವಾಗಿರುತ್ತಿತ್ತು!! ಆದರೆ ಯುಪಿಎ ಸರಕಾರ ದೇಶ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಎಲ್ಲಿ ಹಗರಣ, ಲೂಟಿ ಮಾಡುವುದು ಹೇಗೆ ಎಂಬುವುದನ್ನೇ ಚಿಂತಿಸುತ್ತಿತ್ತು!! ಆದರೆ ಈಗ ಮೋದಿ ಯುಗ ಇಂತಹ ಹಗರಣಗಳನ್ನು ಮಾಡುವವರಿಗೆ ಯಾವತ್ತೂ ಕುಮ್ಮಕ್ಕು ಕೊಡಲ್ಲ… ಯುಪಿಎ ಸರಕಾರದ ಅವಧಿಯಲ್ಲಿ ನಮ್ಮ ಭಾರತವನ್ನು ಇಡೀ ವಿಶ್ವದ ಎದುರು ತಲೆತಗ್ಗಿಸುವಂತೆ ಮಾಡಿದ್ದರು!! ಆದರೆ ಮೋದಿಜೀ ಅಧಿಕಾರವಹಿಸಿದ ಬಳಿಕ ಇಡೀ ವಿಶ್ವವೇ ಭಾರತವನ್ನು ತಲೆ ಎತ್ತಿ ನೋಡವಂತಾಗಿದೆ. ಅಷ್ಟರ ಮಟ್ಟಿಗೆ ಭಾರತವನ್ನು ಬದಲಾಯಿಸಿದ್ದಾರೆ ಮೋದಿಜೀ!!




Comments
Post a Comment