ಸುದ್ದಿ ಸ್ಪೋಟ: ಕಾಂಗ್ರೆಸ್ ಜೊತೆಗಿನ ಸ್ನೇಹ ಮುರಿದುಕೊಳ್ಳುವುದಕ್ಕೆ ಮುಂದಾದ ಹೆಚ್.ಡಿ ದೇವೇಗೌಡ್ರು? ಬಿಜೆಪಿ ಜೊತೆಗೆ ಸರ್ಕಾರ??

ಕಾಂಗ್ರೆಸ್ ನಲ್ಲಿ ಕೆಲ ದಿವಸಗಳಿಂದ ನಡೆಯುತ್ತಿರುವ ಆತಂಕರಿಕ ಬಿಕ್ಕಟ್ಟಿನಿಂದ ಸರ್ಕಾರದ ಮೇಲೆ ನಕಾರತ್ಮಕ ಪರಿಣಾಮ ಬೀರುತ್ತಿದ್ದು, ಇದು ದೋಸ್ತಿ ಸರ್ಕಾರದ ಜೆಡಿಎಸ್ ಗೆ ಇನ್ನಿಲ್ಲದ ತಲೆನೋವಾಗಿ ಪರಿಣಾಮಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪಿಎಂ ಹೆಚ್.ಡಿ ದೇವೆಗೌಡರಿಗೆ ಚಿಂತೆ ಮಾಡುವ ಹಾಗೇ ಮಾಡಿದೆ.

ಈ ನಡುವೆ ಜೆಡಿಎಸ್​ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡ ಅವರು ಕಾಂಗ್ರೆಸ್​ ಹೈಕಮಾಂಡ್​ಗೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದ್ದು, ನಿಮಗೆ ಮೈತ್ರಿಯನ್ನು ನಿಭಾಯಿಸುವುದು ಕಷ್ಟವಾಗಿದ್ದರೆ ಸ್ಪಷ್ಟವಾಗಿ ಹೇಳಿಬಿಡಿ, ನಮ್ಮ ಜೊತೆ ಸರ್ಕಾರ ನಡೆಸುವುದಕ್ಕೆ ಬಿಜೆಪಿಯವರು ಸಿದ್ದರಾಗಿದ್ದಾರೆ, ಸುಮ್ಮನೆ ಕಾಲಹರಣ ಮಾಡಿಕೊಂಡು ರಾಜ್ಯದ ಜನತೆಗೆ ಕೆಟ್ಟ ಸಂದೇಶವನ್ನು ನೀಡುವುದು ಬೇಡ ಅಂತ ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದಾರೆ ಎನ್ನಲಾಗಿದೆ.

Comments