ನ್ಯೂಸ್: ಮಹಾರಾಷ್ಟ್ರದಲ್ಲಿ ಬಿಡುಗಡೆಯಾಗುತ್ತಾ ಮೋದಿ ಕಿರುಚಿತ್ರ....!!!???
ಪ್ರಧಾನಿ ನರೇಂದ್ರ ಮೋದಿ ಬಾಲ್ಯ ಜೀವನಾಧರಿತ ಕಿರುಚಿತ್ರ "ಚಲೋ ಜೀತೆ ಹೈ" ಯನ್ನು ಸೆ. 18 ರಂದು ವೀಕ್ಷಣೆಗೆ ಅವಕಾಶ ಕಲ್ಪಿಸಬೇಕು ಎಂದು ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಶಾಲೆಗಳು ಮನವಿ ಮಾಡಿವೆ.
ಮಂಗೇಶ್ ಹಡ್ ವಾಲೆ ನಿರ್ದೇಶಿಸಿರುವ ಪ್ರಧಾನಿ ಜೀವನಾಧರಿತ ಕಿರುಚಿತ್ರ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲಿದೆ. ಬಾಲ್ಯದಲ್ಲಿ ಪ್ರಧಾನಿ ಮೋದಿ ಅವರು ಸ್ವಾಮಿ ವಿವೇಕಾನಂದರ ಜೀವನದಿಂದ ಹೇಗೆ ಪ್ರೇರೆಪಿತರಾದರು ಎಂದು ಬಿಂಬಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳ ವೀಕ್ಷಣೆಗೆ ಮತ್ತೊಮ್ಮೆ ಕಿರುಚಿತ್ರ ಬಿಡುಗಡೆ ಮಾಡಿ ಜಿಲ್ಲಾ ಪರಿಷತ್ ಶಾಲೆಗಳು ಮನವಿ ಮಾಡಿವೆ.
ಆದರೆ, ಈ ಕಿರುಚಿತ್ರ ವಿಚಾರವಾಗಿ ಮಹಾರಾಷ್ಟ್ರದ ಆಡಳಿತ ಬಿಜೆಪಿ ಸರ್ಕಾರ, ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಕಾಂಗ್ರೆಸ್ ಮತ್ತು ಎಸ್ ಸಿಪಿ ಆರೋಪಿಸಿದೆ.


Comments
Post a Comment