ಬಿಗ್ ಬ್ರೇಕಿಂಗ್ ನ್ಯೂಸ್: ಬಿಜೆಪಿಯವರಿಗೆ ಸದ್ಯದಲ್ಲೇ ಸಿಹಿ ಸುದ್ದಿಯನ್ನು ನೀಡಲಿರುವ ಬಿ.ಎಸ್.ವೈ...!!!! ಏನದು ಗೊತ್ತಾ?

ದೋಸ್ತಿ ಸರಕಾರದ ಅಂಗಪಕ್ಷಗಳಿಗೆ ತಮ್ಮ ಪಕ್ಷದ ಶಾಸಕರನ್ನು ಕಟ್ಟಿಹಾಕುವುದು ಒಂದು ತಲೆನೋವು ಆದ್ರೆ ಅತ್ತಕಡೆ ಬಿ.ಎಸ್.ವೈಗೆ ಇನ್ನೊಂದು ಹೊಸ ಕೆಲಸ ಶುರುವಾಗಿದೆ. ಹೌದು, ಬಿಎಸ್.ವೈ ನಿವಾಸದ ಸಭೆಯಲ್ಲಿ ಇಂದು ಪಕ್ಷದ ಹಲವು ಶಾಸಕರು ಭಾಗಿಯಾಗಿದ್ದಾರು. ಈ ವೇಳೆ ಹಲವು ವಿಚಾರಗಳು ಚರ್ಚೆಗಳಾಗಿವೆ ಎನ್ನಲಾಗಿದೆ.

ಗೌರಿ ಗಣೇಶ ಹಬ್ಬದ ಶುಭಾಷಯಗಳ ವಿನಿಮಯದ ನೆಪದಲ್ಲಿ ಶಾಸಕರು ಯಡಿಯೂರಪ್ಪ ಜೊತೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದ್ದು. ಈ ವೇಳೆ ಬಿ.ಎಸ್.ವೈ ಅವರು ಚೌತಿ ಬಳಿಕ‌ ಶುಭ ಸುದ್ದಿ ಸಿಗುತ್ತೆ, ಸ್ವಲ್ಪ ತಾಳ್ಮೆ ಇರಲಿ. ಆದ್ರೆ ಜೆಡಿಎಸ್, ಕಾಂಗ್ರೆಸ್ ಅವರ ಆಟದ ಮೇಲೆ ಕಣ್ಣಿಡಿ, ಏನ್ ಮಾಡ್ತೀವಿ ಅಂತಾ ನಾನು ಹೇಳುವುದಿಲ್ಲ ಅಂತ ತಮ್ಮ ಪಕ್ಷದವರಿಗೆ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಕಳೆದು ಮೂರ್ನಾಲ್ಕು ದಿನಗಳಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಬಗ್ಗೆ ರಾಜ್ಯ ಬಿಜೆಪಿ ಘಟಕ ಹೈಕಮಾಂಡ್ ಗೆ ಮಾಹಿತಿ ರವಾನೆ ಮಾಡಿದೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ವಿವಿಧ ನಾಯಕರುಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತರ್ಜುಮೆ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

Comments