ಬಿಗ್ ಬ್ರೇಕಿಂಗ್: 'ಭಾರತ್ ಬಂದ್'ಗೆ ಆ ಕಾಂಗ್ರೆಸ್ ಮುಖಂಡರೆ ವಿರೋಧ ವ್ಯಕ್ತಪಡಿಸಿದ್ದರು!!! ಯಾರು ಅವರು ಗೊತ್ತೆ???
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಭಾರತ್ ಬಂದ್‍ಗೆ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ್ ಬಂದ್ ನಡೆಸಿರುವುದು ಸರಿಯಲ್ಲ. ದೇಶ ವಿರೋಧಿಯಾಗಿದೆ ಎಂದಿದ್ದಾರೆ. ಬಂದ್ ಗೆ ಯಾವ ಪಕ್ಷ ಕರೆ ನೀಡುತ್ತದೆಯೋ ಅವರು ನಷ್ಟವನ್ನು ಭರಿಸಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ಬಂದ್ ಗೆ ಕರೆ ಕೊಡುವವರು ಬಹಳ ಜಾಗೃತೆಯಿಂದ ಇರಬೇಕು ಎಂದಿದ್ದಾರೆ. ಕರೆ ಕೊಟ್ಟ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಕ್ಷ ಹಾಗೂ ಬಂದ್ ಗೆ ಕರೆ ನೀಡಿದವರೇ ಹೊಣೆಯಾಗಬೇಕಾಗುತ್ತದೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಪೂಜಾರಿಯೇ ಇರಲಿ ಬಂದ್ ಗೆ ಕರೆ ನೀಡುವುದು ತಪ್ಪು ಎಂದು ಅವರು ತಿಳಿಸಿದ್ದಾರೆ.


Comments
Post a Comment