ತನ್ನ ಪ್ರಾಣ ಪಣಕ್ಕಿಟ್ಟು ಸೀನಿಮಿಯಾ ರೀತಿಯಲ್ಲಿ ಹಲವರ ಪ್ರಾಣ ರಕ್ಷಿಸಿದ ಪೋಲಿಸ್ ಆಧಿಕಾರಿ
ಝಾನ್ಸಿಯ ಮವೋರಾನಿಪುರದ ಚಿವಾಯಂತ್ ಎಂಬಲ್ಲಿ ಪೋಲಿಸ್ ಅಧಿಕಾರಿಯೊಬ್ಬರು ಮಾಡಿದ ಸಹಾಸಗತೆ ಎಲ್ಲೆಡೆ ವೈರಲ್ ಆಗುತ್ತಿದೆ.
ಅಲ್ಲಿನ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡಿತ್ತು ಇದರಿಂದ ಹೆದರಿದ ಮನೆಯವರು ಕಿರುಚಾಡಲು ಶುರು ಮಾಡಿದ್ದಾರೆ. ಸ್ಥಳೀಯರು ಗಾಬರಿಗೊಂಡು ಅಲ್ಲಿನ ಪೋಲಿಸ್ ಠಾಣೆ ಮಾಹಿತಿ ನೀಡಿದ್ದಾರೆ.
ಕಿಂಚಿತ್ತೂ ಸಮಯವನ್ನು ವ್ಯರ್ಥ ಮಾಡದ ಪೋಲಿಸರು ಠಾಣೆಯ ಇಂಚಾರ್ಜ್ ಪ್ರೇಮಚಂದ್ರ ಅವರ ಸಾರಥ್ಯದಲ್ಲಿ ಅವರ ಟೀಮ್ ಸ್ಥಳಕ್ಕೆ ದೌಡಯಿಸುತ್ತದೆ.
ತಕ್ಷಣ ಕಾರ್ಯಪ್ರವುತರಾದ ಪೋಲಿಸ್ ಆಧಿಕಾರಿ ಪ್ರೇಮ್ ಚಂದ್ರ ರವರು ಮೊದಲಿಗೆ ಗ್ಯಾಸ್ ಸಿಲಿಂಡರ್ ಮೇಲೆ ಚಂಡಿ ಮಾಡಿದ ಕಂಬಳಿ, ಗೋಣಿ ಯನ್ನು ಹಾಕುತ್ತಾರೆ ಅದರೆ ಇದ್ಯಾವುದರಿಂದಲು ಬೆಂಕಿ ಆರುವುದಿಲ್ಲ, ಬೆಂಕಿ ನಂದಿಸಲು ತಮ್ಮ ಪ್ರಾಣ ಪಣಕ್ಕಿಟ್ಟ ಪ್ರೇಮಚಂದ್ರರವರು ಸಿಲಿಂಡರ್ ಗೆ ತಂತಿ ಕಟ್ಟಿ ಊರ ಹೊರಗಿನ ನದಿಯವರೆಗು ಎಳೆದುಕೊಂಡು ಹೋಗಿ ಬೆಂಕಿ ಆರಿಸುವಲ್ಲಿ ಸಫಲರಾಗಿದ್ದಾರೆ. ಪ್ರೇಮ್ ಚಂದ್ರರ ಈ ಕಾರ್ಯ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ವೀಡಿಯೊ ನೋಡಿ.

Comments
Post a Comment