ಭಾರತ್ ಬಂದ್ : ಸಂಸದ ಪ್ರತಾಪ್ ಸಿಂಹ ಹೇಳಿದ್ದೇನು?



ಈ ಹಿಂದೆ ನಾವು ಮಂಗಳೂರು ಚಲೋ ಮಾಡಿ, ಬಂದ್ ಮಾಡಲು ಮುಂದಾದಾಗ ಸಚಿವ ಯು.ಟಿ.ಖಾದರ್ ಬಂದ್ ಮಾಡುವವರನ್ನು ಚಪ್ಪಲಿಯಲ್ಲಿ ಹೊಡೆಯಬೇಕು ಎಂದಿದ್ದರು. ಈಗ ಅವರು ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತೈಲ ಬೆಲೆ ಏರಿಕೆ ಖಂಡಿಸಿ ದೇಶಾದ್ಯಂತ ಭಾರತ್ ಬಂದ್ ಆಗಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯು.ಟಿ.ಖಾದರ್ ಅವರು ಚಪ್ಪಲಿಯನ್ನು ಎಲ್ಲಿ ಇಟ್ಟುಕೊಂಡಿದ್ದಾರೆ. ಆ ಚಪ್ಪಲಿಯಲ್ಲಿ ನಾವು ಯಾರಿಗೆ ಹೊಡೆಯಬೇಕು ಎಂದು ಪ್ರಶ್ನಿಸಿದ್ದಾರೆ.

ದುರುದ್ದೇಶಪೂರ್ವಕವಾಗಿ ಶಾಲೆಗಳಿಗೆ ರಜೆ ಘೋಷಿಸಿ, ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಲು ಕಾಂಗ್ರೆಸ್ ಕಾರಣ, ಹಾಗಾಗಿ ಕಾಂಗ್ರೆಸ್ ಋಣ ತೀರಿಸಲು ಸಿಎಂ ಬಂದ್ ಗೆ ಬೆಂಬಲ ನೀಡಿದ್ದಾರೆ ಎಂದರು.

Comments