ವಿಶ್ವದಲ್ಲೆ ಅತೀ ಎತ್ತರವಾದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲ್ಲಿದ್ದಾರೆ ಪ್ರಧಾನಿ ಮೋದಿ; ಈ ಪ್ರತಿಮೆಯ ವಿಶೇಷತೆಗಳನ್ನು ನೀವು ತಿಳಿಯಿರಿ!!!

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಭಾವಿ ನಾಯಕ, ಭಾರತೀಯರ ಹೆಮ್ಮೆ. ಇಂತಹ ನರೇಂದ್ರ ಮೋದಿಯವರು ತಮ್ಮ ಮಾತಿನಂತೆ ಪ್ರಧಾನ ಸೇವಕನಾಗಿ ಪ್ರತಿ ದಿನವೂ ದನಿವಾರಿಯದೆ ಕೆಲಸ ಮಾಡುತ್ತಿರುತ್ತಾರೆ. ದೇಶಕ್ಕಾಗಿ ಹಾಗೂ ದೇಶದ ಜನತೆಗಾಗಿ ಕೆಲಸ ಮಾಡುವ ನರೇಂದ್ರ ಮೋದಿಯವರು ಸದ್ಯ ಒಂದು ಐತಿಹಾಸಿಕ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ. ಈ ಪ್ರತಿಮೆ ವಿಶೇಷತೆ ಹಾಗೂ ಮಹತ್ವ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ.

ಜಗತ್ತಿನ ಅತೀ ಎತ್ತರವಾದ ಪ್ರತಿಮೆಗಳ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅಂತಹ ಎತ್ತರದ ಪ್ರತಿಮೆಗಳ ಸಾಲಿಗೆ ಭಾರತದ ಪ್ರತಿಮೆಯು ಸೇರಲಿದೆ. ಹೌದು,ಭಾರತ "ಉಕ್ಕಿನ ಮನುಷ್ಯ" ಎಂದು ಕರೆಯಲ್ಪಡುವ ಸರ್ದಾರ್ ವಲ್ಲಭಬಾಯಿ ಪಟೇಲ್ ರವರ ಪ್ರತಿಮೆಯನ್ನು ಇದೇ ಅಕ್ಟೋಬರ್ 31, ಪಟೇಲ್ ಜನ್ಮದಿನದಂದು ಈ ಪ್ರತಿಮೆಯನ್ನು ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲ್ಲಿದ್ದಾರೆ. ಇದು ಜಗತ್ತಿನ ಅತೀ ಎತ್ತರವಾದ ಪ್ರತಿಮೆಯಾಗಿರಲಿದೆ.

ಸರ್ದಾರ್ ವಲ್ಲಭಬಾಯಿ ಪಟೇಲ್ ಅಂದಿನ ಕಾಂಗ್ರೆಸ್ ಪಕ್ಷದ ಪ್ರಮುಖರು, ಅದರೆ ಕಾಂಗ್ರೆಸ್ ಪಕ್ಷವು ಅವರನ್ನು ಎಂದು ಸ್ಮರಿಸಲಿಲ್ಲ. ಅದರೆ ನಮ್ಮ ಪ್ರಧಾನಿ ಮೋದಿಯವರು ದೇಶ ಭಕ್ತ ಪಟೇಲ್ ರ ಮಹತ್ವವನ್ನು ದೇಶದ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಗುಜಾರತಿನ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ಶಂಕುಸ್ಥಾಪನೆ ಮಾಡಿದ್ದರು.

ಸರ್ದಾರ್ ಪಟೇಲರ ಈ ಮೂರ್ತಿ 182 ಮೀಟರ್ ಎತ್ತರದ್ದಿರಲಿದೆ:

ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದ ದೇಶದ ಕ್ರಾಂತಿಕಾರಿಗಳು, ಸ್ವಾತಂತ್ರ್ಯ ಸೇನಾನಿಗಳ ಸಂಘರ್ಷದ ಜೀವನದ ಕುರಿತಾಗಿ ದೇಶದ ಜನರಿಗೆ ತಿಳಿಸುವ ಕಾರ್ಯವನ್ನ ಪ್ರಧಾನಿ ಮೋದಿ ಮಾಡುತ್ತಲೇ ಬಂದಿದ್ದಾರೆ. ಇದರ ನಡುವೆ ಅವರು ಸರ್ದಾರ ವಲ್ಲಭಭಾಯಿ ಪಟೇಲರ ವಿಶ್ವದ ಪ್ರತಿಮೆ “ಸ್ಟ್ಯಾಚೂ ಆಫ್ ಯೂನಿಟಿ” ಇದೇ ಅಕ್ಟೋಬರ್ 31 ಕ್ಕೆ ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸರ್ದಾರ್ ಪಟೇಲರ 182 ಮೀಟರ್ ಎತ್ತರದ ಜಗತ್ತಿನ ಅತಿದೊಡ್ಡ ಪ್ರತಿಮೆಯ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು.

ಸ್ಟ್ಯಾಚ್ಯೂ ಆಫ್ ಯೂನಿಟಿಯ ವಿಶೇಷತೆ:
ಈ ಪ್ರತಿಮೆಯನ್ನ ಸ್ಥಾಪಿಸಲು ಬಿಜೆಪಿ ದೇಶದ ಮೂಲೆ ಮೂಲೆಗಳಿಂದ ಲೋಹವನ್ನು ಸಂಗ್ರಹಿಸುವ ಅಭಿಯಾನವನ್ನ ನಡೆಸಿತ್ತು. ಸುದ್ದಿ ಮೂಲಗಳ ಪ್ರಕಾರ ಹೇಳುವುದಾದರೆ ಈ ಮೂರ್ತಿಯೂ ಪ್ರಪಂಚದ ಅತಿ ಎತ್ತರದ ಮೂರ್ತಿಯಾಗಲಿದೆಯಂತೆ. 182 ಮೀಟರ್ ಉದ್ದದ ವಿಶಾಲಕಾಯದ ಈ ಅದ್ಭುತ ಪ್ರತಿಮೆಯ ನಿರ್ಮಾಣ ಕಾರ್ಯ ಗುಜರಾತಿನ ಸಾಧುಬೇಟ್ ನಲ್ಲಿ ನಡೆಯುತ್ತಿದೆ. ಈ ಸ್ಥಳ ಗುಜರಾತಿನ ಭರೂಚ್ ಜಿಲ್ಲೆಯಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟಿನಿಂದ ಕೇವಲ 3.3 ಕಿಲೋಮೀಟರ್ ದೂರದಲ್ಲಿದೆ.

ಪ್ರಪಂಚದ ಎತ್ತರದ ಮೂರ್ತಿಗಳು:
ಚೀನಾದ ಲೂಸಾನ್ ನಲ್ಲಿರುವ ಗೌತಮ ಬುದ್ಧನ ಮೂರ್ತಿಯು ಜಗತ್ತಿನ ಅತಿ ಎತ್ತರದ ಮೂರ್ತಿಯೆಂದೇ ಖ್ಯಾತ ವಾಗಿದೆ. ಈ ಪ್ರತಿಮೆಯ ಎತ್ತರ 153 ಮೀಟರ್ ಇದೆ. 2002 ರಲ್ಲಿ ಈ ಮೂರ್ತಿಯ ಸ್ಥಾಪನೆಯಾಗಿತ್ತು. ಇದಾದ ಬಳಿಕ ಮಯನ್ಮಾರ್ ನಲ್ಲಿ ಕೂಡ ಗೌತಮ ಬುದ್ಧನ ಪ್ರತಿಮೆಯನ್ನ ಸ್ಥಾಪಿಸಲಾಗಿದ್ದು ಅದರ ಎತ್ತರ 116 ಮೀಟರ್ ಇತ್ತು. 2008 ರಲ್ಲಿ ಉದ್ಘಾಟನೆಗೊಂಡಿದ್ದ ಈ ಪ್ರತಿಮೆಯನ್ನ ನೋಡಲು ಲಕ್ಷಾಂತರ ಜನ ಮಯನ್ಮಾರ್ ಗೆ ಹೋಗುತ್ತಾರೆ.
ಇದೀಗ ಆ ಎಲ್ಲಾ ಪ್ರತಿಮೆಗಳಿಗಿಂತಲೂ ಎತ್ತರವಾದ ಸರ್ದಾರ ಪಟೇಲರ ಪ್ರತಿಮೆ. ಗುಜರಾತಿನಲ್ಲಾಗುತ್ತಿದ್ದು ದೇಶ ವಿದೇಶಗಳಿಂದ ಜನರನ್ನ ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ.

Comments