ಹೊಸ ದಾಖಲೆ ನಿರ್ಮಿಸಿರುವ ಮೋದಿ ಸರಕಾರ!! ರೈಲ್ವೆ ಅಪಘಾತದಲ್ಲಿ ಶೇಕಡ 93ರಷ್ಟು ಇಳಿಕೆ!! ಇದಲ್ಲವೇ ಮೋದಿಯ ಅಚ್ಛೇದಿನ್?!!
ನರೇಂದ್ರ ಮೋದಿಯವರು ಅಧಿಕಾರದ ಗದ್ದುಗೆಯನ್ನು ಏರಿದಂದಿನಿಂದಲೂ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆಯಲ್ಲದೇ ದೇಶದ ಅತೀ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ಇಲಾಖೆಯು ಇದೀಗ ಹೊಸ ದಾಖಲೆಯನ್ನು ನಿರ್ಮಿಸುವುದರೊಂದಿಗೆ ನರೇಂದ್ರ ಮೋದಿ ಸರಕಾರದ ಕಾರ್ಯವೈಖರಿಯ ಬಗೆಗೆ ಇಡೀ ದೇಶವೇ ಕೊಂಡಾಡುವಂತೆ ಮಾಡಿದೆ!! ಭಾರತ ಸಂಚಾರದ ಜೀವನಾಡಿಯಾಗಿರುವ ಮತ್ತು ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆಯಲ್ಲಿ ಪದೇ ಪದೇ ಹಳಿ ತಪ್ಪುವಿಕೆ, ಅಪಘಾತ, ಭಾರೀ ಪ್ರಮಾಣದ ಸಾವು-ನೋವಿಗಾಗಿ ಸದಾ ಟೀಕೆಗೆ ಗುರಿಯಾಗುವ ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಇದೀಗ ಹೊಸ ದಾಖಲೆ ನಿರ್ಮಿಸಿದೆ!!
ಹೌದು, ಕಳೆದ 35 ವರ್ಷಗಳಲ್ಲೇ ಮೊದಲ ಬಾರಿಗೆ ರೈಲ್ವೆ ಅಪಘಾತಗಳ ಪ್ರಮಾಣ ಎರಡಂಕಿಗೆ ಇಳಿದಿದ್ದು, 2017-18ನೇ ಹಣಕಾಸು ವರ್ಷದಲ್ಲಿ ಮಾರ್ಚ್ 31ರ ವರೆಗೆ 73 ಅಪಘಾತಗಳು ಸಂಭವಿಸಿವೆ. ಅಷ್ಟೇ ಅಲ್ಲದೇ 2016-2017ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟಾರೆ 104 ಅಪಘಾತಗಳು ಸಂಭವಿಸಿದ್ದವು. ಇದಕ್ಕೆ ಹೋಲಿಸಿದರೆ 2017-18ರಲ್ಲಿ ಅಪಘಾತಗಳ ಪ್ರಮಾಣ ಶೇ.29ರಷ್ಟು ಇಳಿಕೆಯಾಗಿದೆ. ಅದೇ ರೀತಿ ರೈಲ್ವೆ ಹಳಿ ತಪ್ಪುವಿಕೆ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ 39ಕ್ಕೆ ಇಳಿಕೆಯಾಗಿರುವುದು ಗಮನಾರ್ಹ ಸಂಗತಿಯಾಗಿತ್ತು ಎಂದು ಹೇಳಲಾಗಿತ್ತು!!
ಆದರೆ ಇದೀಗ ಕಳೆದ 5 ವರ್ಷಗಳಿಂದ ರೈಲ್ವೆ ಅಪಘಾತಗಳಲ್ಲಿ ಗಣನೀಯವಾಗಿ ಅಂದರೆ ಶೇಕಡ 93ರಷ್ಟು ಕಡಿಮೆ ಆಗಿರುವ ಮೂಲಕ ಮೋದಿ ಕಾರ್ಯವೈಖರಿಗೆ ದೇಶವೇ ಹೆಮ್ಮೆ ಪಡುವಂತೆ ಮಾಡಿದೆ!! ಇನ್ನು ಈ ಬಗ್ಗೆ ರೈಲ್ವೆ ಸಚಿವಾಲಯ ತೆಗೆದುಕೊಳ್ಳುತ್ತಿರುವ ಸುರಕ್ಷಿತ ಕಾರ್ಯಗಳು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ!! ಈ ಬಾರಿಯ ವರದಿಯಂತೆ ಸೆಪ್ಟೆಂಬರ್ 2017 ರಿಂದ 2018 ಆಗಸ್ಟ್ ವರೆಗೆ ದೇಶದಲ್ಲಿ 75 ರೈಲು ಅಪಘಾತಗಳು ಸಂಭವಿಸಿದ್ದು, ಇದರಿಂದಾಗಿ 40 ಪ್ರಯಾಣಿಕರು ಸಾವನ್ನಪ್ಪಿದ್ದರು!!
ಅದೇ ರೀತಿ 2013-14 ರಲ್ಲಿ 139 ರೈಲು ಅಪಘಾತಗಳು ಸಂಭವಿಸಿದ್ದು 275 ಮಂದಿ ಸಾವಿಗೀಡಾಗಿದ್ದರು!! 2014-15 ರಲ್ಲಿ 108 ರೈಲು ಅಪಘಾತಗಳು ಸಂಭವಿಸಿದ್ದು, 196 ಮಂದಿ ಮೃತಪಟ್ಟಿದ್ದರು!! 2015-16 ರಲ್ಲಿ 23 ರೈಲು ಅಪಘಾತಗಳು ಸಂಭವಿಸಿದ್ದು ಇದರಿಂದಾಗಿ 107 ಮಂದಿ ಅಸುನೀಗಿದ್ದರು!! 2016-17ರಲ್ಲಿ 80 ರೈಲು ಅಪಘಾತಗಳು ಸಂಭವಿಸಿದ್ದು 249 ಮಂದಿ ಅಸುನೀಗಿದ್ದರು!! ಅಪಘಾತಗಳ ಸಂಖ್ಯೆ 2017 ರಿಂದ 2018ರಲ್ಲಿ 75ಕ್ಕೆ ಇಳಿಮುಖವಾಗಿದ್ದು 40 ಮಂದಿ ಸಾವನ್ನಪ್ಪಿದ್ದಾರೆ!! ಇನ್ನು ಈ ಬಗ್ಗೆ ಹೆಚ್ಚಿನ ಕ್ರಮ ವಹಿಸಿರುವ ರೈಲ್ವೆ ಸಚಿವಾಲಯವು 2020ರೊಳಗೆ ದೇಶದಲ್ಲಿ ಮಾನವರಹಿತ ಕ್ರಾಸಿಂಗ್ ನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗುವುದೆಂದು ಹೇಳಿದೆ.
ಇತ್ತೀಚಿನ ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿತಪ್ಪಿದ ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯುನ್ನತ ಹಾಗೂ ಹೆಚ್ಚು ಭದ್ರತೆ ಇರುವ ಬುಲೆಟ್ ರೈಲು ಯೋಜನೆ ಆರಂಭವಾಗುತ್ತಿರುವ ಮೂಲಕ ರೈಲ್ವೇ ವ್ಯವಸ್ಥೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ ಈ ಯೋಜನೆಯಿಂದ ಪ್ರಯಾಣಿಕರ ಸುರಕ್ಷತೆ, ಸಂಚಾರದ ವೇಗ, ಗ್ರಾಹಕರಿಗೆ ಅತ್ಯುತ್ತಮ ಸೇವೆ ಹಾಗೂ ತಂತ್ರಜ್ಞಾನ, ಕೌಶಲ್ಯ ಹಾಗೂ ಮಾನದಂಡಗಳ ವಿಚಾರದಲ್ಲಿ ಭಾರತೀಯ ರೈಲ್ವೆ ವಿಶ್ವದ ಪ್ರಮುಖ ರೈಲ್ವೆಗಳ ಪೈಕಿ ಒಂದಾಗಲು ಸಹಾಯಕಾರಿಯಾಗಲಿದೆ. ಹಾಗಾಗಿ ಈ ಬುಲೆಟ್ ರೈಲು ಯೋಜನೆ ಭಾರತದ ಸಾರಿಗೆ ಇತಿಹಾಸವನ್ನೇ ಬದಲಿಸುವ ನಿರೀಕ್ಷೆಯೂ ಇದೆ.
ದೇಶಕ್ಕೆ ಹೆಚ್ಚಿನ ಆದಾಯ ನೀಡುವ ರೈಲ್ವೆ ವಿಚಾರವಾಗಿ ಇತ್ತೀಚೆಗಷ್ಟೇ ಬಜೆಟ್ ಮಂಡಿಸಿರುವ ಹಣಕಾಸು ಸಚಿವರು, 2017ರ ಸೆಪ್ಟೆಂಬರ್ ನಲ್ಲಿ ಬುಲೆಟ್ ಟ್ರೈನ್ ಗಾಗಿ ಅಡಿಗಲ್ಲು ಹಾಕಲಾಗಿರುವ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆಯೇ, ಹೈಸ್ಪೀಟ್ ರೈಲು ಯೋಜನೆಗಳಿಗಾಗಿ ತರಬೇತಿ ನೀಡಲು ಬರೋಡಾದಲ್ಲಿ ಸಂಸ್ಥೆ ಸ್ಥಾಪಿಸಲಾಗುತ್ತಿದೆ ಎಂದು ಹೇಳಿದ್ದರು!! ಅಷ್ಟೇ ಅಲ್ಲದೇ, 160 ಕಿ.ಮೀ. ಉದ್ದದ ಬೆಂಗಳೂರು ಸಬರ್ಬನ್ ಯೋಜನೆಗಾಗಿ 17 ಸಾವಿರ ಕೋಟಿ ರೂಪಾಯಿ ನಿಯೋಜನೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದರು.
ತಮ್ಮ ಬಜೆಟ್ ಮಂಡನೆಯಲ್ಲಿ ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆಯೂ ತಿಳಿಸಿದ್ದರು. ಇದಷ್ಟೇ ಅಲ್ಲದೇ, ಎಲ್ಲ ನಿಲ್ದಾಣಗಳಲ್ಲಿ ವೈಫೈ, ಸಿಸಿಟಿವಿ ಅಳವಡಿಸಲಾಗುವ ಬಗ್ಗೆಯೂ ಪ್ರಸ್ತಾಪಿಸಿರುವ ಹಣಕಾಸು ಸಚಿವರು, ಮುಂಬೈ ರೈಲು ಸಂಪರ್ಕವನ್ನು 11 ಕೋಟಿ ರೂಪಾಯಿ ಯೋಜನೆಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದೂ ತಮ್ಮ ಬಜೆಟ್ ನಲ್ಲಿ ಮಂಡಿಸಿದ್ದರು!! ಒಟ್ಟಿನಲ್ಲಿ ಅತಿ ದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆಯಲ್ಲಿ ಪದೇ ಪದೇ ಹಳಿ ತಪ್ಪುವಿಕೆ, ಅಪಘಾತ, ಭಾರೀ ಪ್ರಮಾಣದ ಸಾವು-ನೋವಿಗಾಗಿ ಸದಾ ಟೀಕೆಗೆ ಗುರಿಯಾಗುವ ಭಾರತೀಯ ರೈಲ್ವೆ ಸುರಕ್ಷತೆಯಲ್ಲಿ ಇದೀಗ ಹೊಸ ದಾಖಲೆ ನಿರ್ಮಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ!!



Comments
Post a Comment