ಬ್ರೇಕಿಂಗ್ ನ್ಯೂಸ್: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ನಿತಿನ್ ಗಡ್ಕರಿ!! 55ಕ್ಕೆ ಇಳಿಯಲಿದೆಯಂತೆ ಪೆಟ್ರೋಲ್ ಬೆಲೆ!!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಚೀನಾ ಅಮೆರಿಕದ ನಡುವಿನ ವಾಣಿಜ್ಯ ಸಮರದಿಂದಾಗಿ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದ ಪರಿಣಾಮ ಕೆಲ ದಿನಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಪ್ರತಿ ದಿನ ಏರಿಕೆಯಾಗುತ್ತಿದೆ. ಆದರೂ ಕೂಡ ನರೇಂದ್ರ ಮೋದಿ ಸರಕಾರದ ವಿರುದ್ಧ ಮಸಿಬಳಿಯಲು ಪ್ರಯತ್ನಿಸುತ್ತಿರುವ ಬುದ್ದಿಜೀವಿಗಳು ದೇಶಾದ್ಯಂತ ಬಂದ್ ಗೆ ಕರೆ ನೀಡಿದ್ದರು!! ಆದರೆ ಇದೀಗ ಈ ಬುದ್ದಿಜೀವಿಗಳಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಾಕಿಂಗ್ ಸುದ್ದಿಯೊಂದನ್ನು ನೀಡಿದ್ದಾರೆ!!

ಈಗಾಗಲೇ 2012-2014 ರ ತನಕ ಯುಪಿಎ ಸರಕಾರದ ಅವಧಿಯಲ್ಲಿ ಜಾಗತಿಕವಾಗಿ ತೈಲ ದರ ಹೆಚ್ಚಿದ್ದರೂ, ದೇಶೀಯವಾಗಿ ತೈಲ ದರಗಳು ಏರಿಕೆಯಾಗಿರಲಿಲ್ಲ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಭಾರತದಲ್ಲಿ ಕಡಿಮೆಯಾಗಿಲ್ಲ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ಆದರೆ ಆಗ ಯುಪಿಎ ಸರಕಾರ 1.44 ಲಕ್ಷ ಕೋಟಿ ರೂಪಾಯಿ ಮೌಲ್ಯದ ತೈಲ ಬಾಂಡ್ ಖರೀದಿಸಿತ್ತು. ಇದಕ್ಕೆ ಕೇವಲ ಬಡ್ಡಿಯಾಗಿ 70 ಸಾವಿರ ಕೋಟಿ ರೂಪಾಯಿಗಳನ್ನು ಎನ್ ಡಿ ಎ ಸರಕಾರ ಪಾವತಿಸಿದೆ. ಒಟ್ಟು 2 ಲಕ್ಷ ಕೋಟಿ ರೂಪಾಯಿಗಳನ್ನು ಮೋದಿ ಸರಕಾರ ಮರು ಪಾವತಿಸಿದೆ.

ಅಷ್ಟೇ ಅಲ್ಲದೇ ಯುಪಿಎ ಸರಕಾರ ಹಗರಣಗಳ ಪರಿಣಾಮ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಇರಲಿಲ್ಲ. ಹೀಗಾಗಿ ತೈಲ ಬಾಂಡ್‍ಗಳ ಮೂಲಕ ಭಾರೀ ಸಾಲವನ್ನು ತೆಗೆದುಕೊಂಡಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಪ್ರತಿಕ್ರಿಯಿಸಿದ್ದರು. “ಕಚ್ಚಾ ತೈಲದ ಮೇಲಿನ ಪ್ರತಿ ರೂಪಾಯಿ ಕಡಿತದಿಂದ ಸರಕಾರಕ್ಕೆ 13 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ. ಒಂದು ವೇಳೆ ಕಡಿತಗೊಳಿಸಿದರೆ ಮುಂದೆ ಆರ್ಥಿಕ ಕೊರತೆಯಾಗಲಿದೆ. ಹೀಗಾಗಿ ಗ್ರಾಹಕರ ಮೇಲಿನ ಹೊರೆಯನ್ನು ತಗ್ಗಿಸಲು ರಾಜ್ಯ ಸರಕಾರಗಳು ತೈಲ ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸಲೇಬೇಕು ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದರು!! ಆದರೆ ಇದೀಗ ಎಥೆನಾಲ್ ಘಟಕಗಳು ಆರಂಭಗೊಂಡ ಬಳಿಕ ಪೆಟ್ರೋಲ್‍ಗೆ ಪ್ರತಿ ಲೀಟರ್‍ಗೆ 55 ರೂಪಾಯಿ ಹಾಗೂ ಡೀಸೆಲ್‍ಗೆ ಪ್ರತಿ ಲೀಟರ್‍ಗೆ 50 ರೂಪಾಯಿ ನಲ್ಲಿ ಲಭ್ಯವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಛತ್ತೀಸ್‍ಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಒಟ್ಟಾರೆ 5 ಎಥೆನಾಲ್ ಉತ್ಪಾದನಾ ಘಟಕಗಳನ್ನು ಕೇಂದ್ರ ಸರಕಾರ ತೆರೆಯಲಿದ್ದು, ಇವುಗಳು ಕಾರ್ಯಾರಂಭ ಮಾಡಿದ ಬಳಿಕ ದೇಶದಲ್ಲಿ ತೈಲ ಬೆಲೆ ಇಳಿಕೆಯಾಗಲಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ, ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನವನ್ನು ಉತ್ಪತ್ತಿ ಮಾಡಲಾಗುತ್ತದೆ. ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ ಎಂದು ಹೇಳಿದರು.
ಎಥೆನಾಲ್, ಮೆಥೆನಾಲ್, ಬಯೋ ಇಂಧನ ಮತ್ತು ಸಿ ಎನ್ ಜಿ ಬಳಕೆ ಹೆಚ್ಚಾದಂತೆ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದಾಗಿ ತೈಲ ಬೆಲೆ ಇಳಿಕೆಯಾಗಲಿದೆ. ಛತ್ತೀಸ್ ಗಢದಲ್ಲಿ ತೆರೆಯಲಾದ ಜತ್ರೋಪಾ ಘಟಕದಿಂದ ಉತ್ಪಾದನೆಯಾದ ಜೈವಿಕ ಇಂಧನವನ್ನು ಬಳಸಿ ಇದೇ ಮೊದಲ ಬಾರಿಗೆ ದೇಶದಲ್ಲಿ ವಿಮಾನವನ್ನು ಹಾರಿಸಲಾಗಿದೆ ಎಂದು ಈ ವೇಳೆ ತಿಳಿಸಿದರು.

ಹೌದು, “ನಾವು 8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದು, ತೈಲ ಬೆಲೆ ಮತ್ತಷ್ಟು ಏರಿಕೆಯಾಗುತ್ತಿದೆ. ಇದರಿಂದಾಗಿ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೈತರು, ಆದಿವಾಸಿಗಳ ಸಹಾಯದಿಂದ ಎಥೆನಾಲ್, ಮೆಥೆನಾಲ್, ಬಯೋ- ಇಂಧನವನ್ನು ತಯಾರಿಸಬಹುದು. ಇವುಗಳನ್ನು ವಿಮಾನ ಹಾರಾಟಕ್ಕೂ ಬಳಸಬಹುದು” ಎಂದು ತಿಳಿಸಿದರು. ಕಳೆದ ಸೋಮವಾರ ಜೈವಿಕ ಇಂಧನ ಬಳಸಿದ್ದ ಸ್ಪೈಸ್ ಜೆಟ್ ವಿಮಾನ ಡೆಹ್ರಾಡೂನ್‍ನಿಂದ ಹೊರಟು ದೆಹಲಿಗೆ ಬಂದಿಳಿದಿತ್ತು. ಈ ವಿಮಾನದಲ್ಲಿ ಶೇ. 75 ಜೆಟ್ ಇಂಧನ ಹಾಗೂ ಶೇ. 25 ಜೈವಿಕ ಇಂಧನ ಬಳಸಲಾಗಿತ್ತು. ಸ್ಪೈಸ್ ಜೆಟ್‍ನ ಬೊಂಬಾರ್ಡಿಯರ್ ಕ್ಯೂ400 ವಿಮಾನವನ್ನು ಈ ಪ್ರಯೋಗಕ್ಕೆ ಬಳಸಲಾಗಿತ್ತು. ಪ್ರಸ್ತುತ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ವಿಮಾನಗಳು ಜೈವಿಕ ಇಂಧನವನ್ನು ಬಳಸುತ್ತಿವೆ.

ಇನ್ನು, ನಗರ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಿಂದ ಘಟಕದಲ್ಲಿ ಇಂಧನ ಉತ್ಪತ್ತಿ ಮಾಡಲಾಗುತ್ತಿದ್ದು, ಭತ್ತ ಹಾಗೂ ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡಬಹುದಾಗಿದೆ. ಪ್ರಸ್ತುತ 8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪೆಟ್ರೋಲ್ ಹಾಗೂ ಡೀಸಲ್‍ನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಡಾಲರ್ ಎದುರು ರೂಪಾಯಿ ಕುಸಿತವಾಗುತ್ತಿರುವುದರಿಂದ ಇಂಧನ ಬೆಲೆ ಏರುತ್ತಿದ್ದು, ಆದಿವಾಸಿ, ರೈತರು ಅರಣ್ಯವಾಸಿಗಳ ಸಹಾಯದಿಂದ ಎಥನಾಲ್, ಮೆಥನಾಲ್, ಬಯೋ ಇಂಧನಗಳನ್ನು ಉತ್ಪತ್ತಿ ಹೆಚ್ಚು ಅವಕಾಶಗಳಿವೆ ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ ಬಯೋ ಡೀಸೆಲ್, ಸಿ ಎನ್ ಜಿಗಳನ್ನು ಬಳಸುವ ಟಾಕ್ಸಿ, ಬಸ್, ಆಟೊ ರಿಕ್ಷಾಗಳಿಗೆ ಪ್ರತ್ಯೇಕ ಪರವಾನಗಿ ಪಡೆಯುವುದು ಈಗ ಅಗತ್ಯವಿಲ್ಲ. ಇದರಿಂದಾಗಿ ಭಾರತ ಅವಲಂಬನೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ ಎಂದು ಹೇಳಿರುವ ಭೂ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಪೆಟ್ರೋಲ್ ಮತ್ತು ಡೀಸೆಲ್ ಪರ್ಯಾಯವಾಗಿ ಎಥೆನಾಲ್ ಬಳಸುವಂತೆ ರೈತರಿಗೆ ಕರೆ ನೀಡಿದ್ದಾರೆ!!


Comments