ಸ್ಪೋಟಕ ಸುದ್ದಿ: ಜನ ಧನ ಖಾತೆಗಳಲ್ಲಿ 42,200 ಕೋಟಿ ಸಂಶಯಾಸ್ಪದ ಹಣ ಜಮಾ!!!!!
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸೇಷನ್ (ಸಿಬಿಡಿಟಿ) ಜನ ಧನ ಖಾತೆಯಲ್ಲಿನ ಠೇವಣಿಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಭಾರೀ ಪ್ರಮಾಣದ ಅನುಮಾನಾಸ್ಪದ ಹಣ ಇರುವುದನ್ನು ಪತ್ತೆ ಮಾಡಿದೆ. 2016 ರ ನವೆಂಬರ್ ೮ ರಂದು ರೂ. 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ ನಂತರದಲ್ಲಿ 37.4 ಬಿಲಿಯನ್ ಜನ ಧನ್ ಖಾತೆಗಳಲ್ಲಿ ಜಮೆಯಾಗಿರುವ ಶೇ. 60 ರಷ್ಟು ಹಣವನ್ನು ಸಂಶಯಾಸ್ಪದ ಎಂದು ಗುರುತಿಸಿದೆ.
2016ರ ನವೆಂಬರ್ 8 ರ ಮತ್ತು ಡಿಸೆಂಬರ್ 30, 2016 ರ ಅವಧಿಯೊಳಗೆ 37.4 ಮಿಲಿಯನ್ ಖಾತೆಗಳಲ್ಲಿ ರೂ. 42,200 ಕೋಟಿ ಸಂಶಯಾಸ್ಪದ ಹಣ ಜಮಾ ಆಗಿದೆ. ಇದೇ ಅವಧಿಯಲ್ಲಿ ಒಟ್ಟು ರೂ. 70 ಸಾವಿರ ಕೋಟಿ ಜಮಾ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿನ ಕಪ್ಪು ಹಣವನ್ನು ತಡೆಯುವ ಉದ್ದೇಶದಿಂದ ರೂ. 500 ರೂ. ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು. ಹಳೆ ನೋಟು ಹಿಂದಿರುಗಿಸಲು 50 ದಿನ ಅವಕಾಶ ಅಂದರೆ ಡಿಸೆಂಬರ್ 30 ರವರೆಗೆ ಕಾಲಾವಕಾಶ ಕೊಡಲಾಗಿತ್ತು.

Comments
Post a Comment