ಬ್ರೇಕಿಂಗ್ ನ್ಯೂಸ್: ಆಂತರಿಕ ಸಮೀಕ್ಷೆ-2019ರ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎಗೆ 360ಕ್ಕೂ ಅಧಿಕ ಸ್ಥಾನ!!!!

ದೇಶದ ರಾಜಕೀಯದಲ್ಲಿ 2014ರಿಂದ ಹೊಸದೊಂದು ಆಲೆ ಶುರುವಾಗಿ, ಶತಮಾನಗಳಿಂದ ಅಸ್ತಿತ್ವದಲ್ಲಿದ ರಾಜಕೀಯ ಪಕ್ಷಗಳ ಸ್ಥಾನವನ್ನು ಬುಡಮೇಲು ಮಾಡಿತ್ತು. ಅದುವೇ ನರೇಂದ್ರ ಮೋದಿ ಎಂಬ ಆಲೆ. 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೋದಿ ನಾಯಕತ್ವದ ಬಿ.ಜೆ.ಪಿ ನಂತರದ ದಿನಗಳಲ್ಲಿ ಸಾಧಿಸಿದ ದಿಗ್ವಿಜಯ ಇತಿಹಾಸ.
2019ರ ಲೋಕಸಭಾ ಚುನಾವಣೆ ಸಮೀಸುತ್ತಿದ್ದು ಎಲ್ಲಾ ರಾಜಕೀಯ ಪಕ್ಷಗಳು ಸೋಲು-ಗೆಲುವುಗಳ ಬಗ್ಗೆ ಲೆಕ್ಕಚಾರ ಹಾಕುತ್ತಿವೆ. ಈ ನಡುವೆ ಎಲ್ಲಾ ಪ್ರತಿಪಕ್ಷಗಳಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.  ಹೌದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎಗೆ 300ಕ್ಕೂ ಅಧಿಕ ಸ್ಥಾನ ಲಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆ ತಿಳಿಸಿದೆ. ಬಿಜೆಪಿಯೇ 300 ಸೀಟು ಗೆಲ್ಲಲಿದೆ, ಎನ್.ಡಿ.ಎಗೆ ಶೇ.51ಕ್ಕೂ ಹೆಚ್ಚು ಶೇಕಡಾವಾರು ಮತ ಸಿಗಲಿದ್ದು, ಇದು 2014ರ ಚುನಾವಣೆಗಿಂತ ಶೇ.12 ಅಧಿಕ ಶೇಕಡಾವಾರು ಮತ ಎಂದು ಸಮೀಕ್ಷೆಯ ವರದಿ ಹೇಳಿದೆ.
ದೇಶದ ಜನರ ಮನಸ್ಥಿತಿ ಬಗ್ಗೆ ನಡೆಸಲಾದ ಸಮೀಕ್ಷೆಯಂತೆ, ಕೇಂದ್ರ ಸರ್ಕಾರದ ಜನಪರ ಕಲ್ಯಾಣ ಕಾರ್ಯಕ್ರಮಗಳು, ಶೇ.90 ಗ್ರಾಮೀಣ ಭಾರತಕ್ಕೆ ತಲುಪಿದೆ. ಇದರಿಂದಾಗಿ ಬಿ.ಜೆ.ಪಿ ಬಗ್ಗೆ ಜನರಿಗೆ ಒಲವಿದೆ ಎಂದು ಸಮೀಕ್ಷಾ ತಂಡದಲ್ಲಿದ್ದ ಮುಖಂಡರೊಬ್ಬರು ಹೇಳಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ ಎಲ್ಲವೂ ಈಗಲೂ ಪ್ರಮುಖ ಸಮಸ್ಯೆಗಳಾಗಿ ಕಾಡುತ್ತಿವೆ.

ಆಂತರಿಕ ಸಮೀಕ್ಷೆ :ಎನ್.ಡಿ.ಎಗೆ 360ಕ್ಕೂ ಅಧಿಕ ಸ್ಥಾನ...!!!! 
ಕ್ರೋಮಾ ಡೇಟಾ ಅನಾಲಿಟಿಕ್ಸ್ - ಟೈಮ್ಸ್ ನೌ ವಾಹಿನಿ:
ದೇಶದ ಜನರ ಮನಸ್ಥಿತಿ ಹೇಗಿದೆ ಎಂಬುದನ್ನು ಅರಿತುಕೊಳ್ಳಲು 'ಕ್ರೋಮಾ ಡೇಟಾ ಅನಾಲಿಟಿಕ್ಸ್ ಮತ್ತು ಟೈಮ್ಸ್ ನೌ ವಾಹಿನಿ' ಜಂಟಿಯಾಗಿ 'ನಮೋ ಜನಪ್ರಿಯತೆಯ ಸಮೀಕ್ಷೆ' ವರದಿ ಮಾಡಿತು. ಒಟ್ಟು 543 ಲೋಕಸಭಾ ಸ್ಥಾನಗಳ ಪೈಕಿ 2014ರಲ್ಲಿ ಚುನಾವಣೆ ನಡೆದಾಗ ಬಿಜೆಪಿ 282 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಒಂದೊಮ್ಮೆ ಈಗ ಚುನಾವಣೆ ನಡೆದರೆ ಬಿಜೆಪಿ ಬರೋಬ್ಬರಿ 318 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಯು ಅಂದಾಜಿಸಿದೆ.

ಆಂತರಿಕ ಸಮೀಕ್ಷೆ : ಎನ್.ಡಿ.ಎ ಗೆ 360ಕ್ಕೂ ಅಧಿಕ ಸ್ಥಾನ..........!!!!!
ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ

ಇಂಡಿಯಾ ಟುಡೇ ಸಿಎಸ್‌ಡಿಎಸ್, ಲೋಕನೀತಿ ಜೊತೆ ಸೇರಿ ನಡೆಸಿದ ಸಮೀಕ್ಷೆ ವರದಿಯಲ್ಲಿ ಎನ್‌.ಡಿ.ಎ ಮೈತ್ರಿಕೂಟ 274, ಯುಪಿಎ ಮೈತ್ರಿಕೂಟ 164, ಇತರರು 105 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಶೇ 37ರಷ್ಟು, ಯುಪಿಎ ಮೈತ್ರಿಕೂಟ ಶೇ 31ರಷ್ಟು, ಇತರರು ಶೇ 32ರಷ್ಟು ಮತಗಳನ್ನು ಪಡೆಯಲಿದೆ.

ಆಂತರಿಕ ಸಮೀಕ್ಷೆ : ಎನ್ಡಿಎಗೆ 360ಕ್ಕೂ ಅಧಿಕ ಸ್ಥಾನ.......!!!!! 
India Today-Karvy ಮೂಡ್ ಆಫ್‌ ದಿ ನೇಷನ್ ಸಮೀಕ್ಷೆ

India Today-Karvy ನಡೆಸಿದ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ ಹೀಗಿರಲಿದೆ. ಇದು ಚುನಾವಣಾ ಫಲಿತಾಂಶದ ಮೊದಲ ಸಾಧ್ಯತೆಯಾಗಿದೆ. 
* ಎನ್‌ಡಿಎ 281 ಸೀಟು
* ಯುಪಿಎ 122 ಸೀಟು
* ಇತರರು 140 ಸೀಟುಗಳನ್ನು ಪಡೆಯಲಿದ್ದಾರೆ.
ಎನ್‌.ಡಿ.ಎ ಶೇ 36ರಷ್ಟು, ಯುಪಿಎ ಶೇ 31ರಷ್ಟು, ಇತರರು ಶೇ 33ರಷ್ಟು ವೋಟ್ ಶೇರ್ ಪಡೆಯಲಿದ್ದಾರೆ.


ಆಂತರಿಕ ಸಮೀಕ್ಷೆ : ಎನ್‌.ಡಿ.ಎಗೆ 360ಕ್ಕೂ ಅಧಿಕ ಸ್ಥಾನ......!!!!!!
ಐ ಪ್ಯಾಕ್ ಸಮೀಕ್ಷೆಯಲ್ಲಿ ಮೋದಿಗೆ ಜಯ

ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ(I-PAC) ನಡೆಸಿದ ಸಮೀಕ್ಷೆ ವರದಿಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮತ್ತೊಮ್ಮೆ ಮುನ್ನಡೆಸಲು ಸಮರ್ಥರು ಎಂದು ಜನತೆ ಅಭಿಪ್ರಾಯಪಟ್ಟಿದ್ದಾರೆ. ಶೇ 48ರಷ್ಟು ಮಂದಿ ಮೋದಿ ಪರ ಮತ ಹಾಕಿದ್ದರೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರ ಶೇ 11ರಷ್ಟು ಮತಗಳು ಬಂದಿವೆ.

ಈ ಮೂಲಕ ದೇಶವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನರೇಂದ್ರ ಮೋದಿಯವರು ಮತ್ತೊಮ್ಮೆ ಜಯವನ್ನು ಸಾಧಿಸಲಿದ್ದಾರೆ.

Comments